ರಾಕಿಂಗ್ ಸ್ಟಾರ್ ಯಶ್ ಹುಟ್ಟುಹಬ್ಬಕ್ಕೆ ಜಗ್ಗೇಶ್ ಟ್ವೀಟ್ ಮಾಡಿದ್ದು ಹೀಗೆ | Filmibeat Kannada

2018-01-08 432

Rocking Star Yash is celebrating his 32nd Birthday. Yash is now busy with his movies. In between he is in Birthday mood & Kannada Film Industry stars are sending their wishes to Yash. Even Actor Jaggesh also wishes Yash trough Twitter & advises Yash to have Baby soon.


ಓಡೋ ಕುದುರೆ ನೋಡಿ ಉರ್ಕೊಬೇಡಿ ತಾಖತ್ತಿದ್ರೆ ತಡಿರಿ..ಎಂದು ಹಾಡಿನ ಮೂಲಕ ಹೇಳಿದ್ದ ನಾಯಕ ಯಶ್ ನಿಜಕ್ಕೂ ಕನ್ನಡ ಸಿನಿಮಾರಂದಲ್ಲಿ ಈಗ ಓಡೋ ಕುದುರೆ. ಜನವರಿ 8 ಹುಟ್ಟುಹಬ್ಬ ಆಚರಣೆ ಮಾಡಿಕೊಳ್ಳುತ್ತಿರುವ ರಾಕಿಂಗ್ ಸ್ಟಾರ್ ಅಭಿನಯದ ಚಿತ್ರಗಳು ಇನ್ನು ಮುಂದೆ ಸಾಲು ಸಾಲಾಗಿ ಬರುತ್ತವೆ.ರಾಕಿಂಗ್ ಸ್ಟಾರ್ ಹುಟ್ಟುಹಬ್ಬಕ್ಕೆ ಶುಭಾಶಯಗಳ ಮಹಾಪೂರವೇ ಹರಿದು ಬರುತ್ತಿದೆ. ಕನ್ನಡ ಚಿತ್ರರಂಗದ ಹಲವು ಸ್ಟಾರ್ ನಟರು ಯಶ್ ಗೆ ಹುಟ್ಟುಹಬ್ಬದ ಶುಭಾಶಯಗಳನ್ನ ಕಳಿಸಿದ್ದಾರೆ. ಇದರಲ್ಲಿ ನವರಸ ನಾಯಕ ಜಗ್ಗೇಶ್ ಕೂಡ ಒಬ್ಬರು. ಜಗ್ಗೇಶ್ ರವರು ಯಶ್ ಗೆ ಟ್ವೀಟ್ ಮೂಲ ಹುಟ್ಟುಹಬ್ಬಕ್ಕೆ ವಿಶ್ ಮಾಡಿದ್ದು ಪುಟಾಣಿ ಯಶ್ ನ ನೋಡಬೇಕೆಂಬ ಬಯಕೆಯನ್ನ ಹೇಳಿಕೊಂಡಿದ್ದಾರೆ. ಆದಷ್ಟು ಬೇಗ ತೊಟ್ಟಿಲು ತೂಗಿ ಹಾಗು ರಾಯರ ಆಶೀರ್ವಾದದೊಂದಿಗೆ ಬೇಗ ಮಗುವಾಗಲಿ ಎಂದು ಆಶೀರ್ವಾದ ಮಾಡಿದ್ದಾರೆ.